Tuesday, April 17, 2018

ದಿ ಕಾಸ್ಟ್ಯೂಮ್ ಪಾರ್ಟಿ - ವಲಸಿಗರ ಕಥನ (The Costume Party - Migrants' Story)

ವಲಸೆ - ಮಿಲಿಯಾಂತರ  ವರ್ಷಗಳಿಂದ  ನಡೆಯುತ್ತಲಿದೆ.  ಇದು  ಬಹುತೇಕ ಹೊಟ್ಟೆಪಾಡಿಗಾಗಿ. ವಲಸೆಗೊಂಡವರು  ಹೊಟ್ಟೆ ತುಂಬಿಸಿಕೊಂಡರೂ ಎಷ್ಟು ನೆಮ್ಮದಿ ಯಿಂದಿರುತ್ತಾರೆ  ಎಂಬುದು  ಹಲವು ಬಾರಿ  ಪ್ರಶ್ನಾರ್ಹವಾಗಿಯೇ  ಉಳಿಯುತ್ತದೆ. ಎಲ್ಲ ಸಮಾಜಗಳೂ  ಬಹುತೇಕವಾಗಿ ವಲಸಿಗರನ್ನು ಅನುಮಾನದಿಂದಲೇ ನೋಡುತ್ತವೆ. ಹಾಗಾಗಿ ವಲಸಿಗರು 'ಪರಕೀಯತೆಯ    ತಾರತಮ್ಯತೆ'  ಎಂಬ  ಮನೋಹಿಂಸೆ ಯಿಂದ  ಬಳಲುವರು.  ಒಮ್ಮೊಮ್ಮೆ ಅವರ ಮುಂದಣ ಪೀಳಿಗೆಗೂ ಆ  ಬಿಸಿ ತಗಲುವುದುಂಟು! ಮುಂದಣ  ಪೀಳಿಗೆಗಂತೂ  ಅದನ್ನು  ಜೀರ್ಣಿಸಿಕೂಳ್ಳುವುದು  ಕಷ್ಟವೇ ಕಷ್ಟ. ಯಾಕೆಂದರೆ ಅವರು ಅಲ್ಲಿಯೂ  ಸಲ್ಲರು, ಇಲ್ಲಿಯೂ ಸಲ್ಲರು. 
ತಾರತಮ್ಯ ಜನನಕ್ಕೆ  ಕಾರಣಗಳು  ಏನಾದರೂ  ಆಗಬಹುದು - ಬಣ್ಣ, ನಿಲುವು, ಹುಟ್ಟು,ಮುಖಚಹರೆ , ಭಾಷೆ , ನಡವಳಿಕೆ , ಆಚಾರ-ವಿಚಾರ , ಇತ್ಯಾದಿ ಏನಾದರೊಂದು! ಕೆಲವು ಕಡೆ  ಇದು ವಿಪರೀತ , ಕೆಲವು ಕಡೆ ಸ್ವಲ್ಪ ಕಡಿಮೆ. ತಾರತಮ್ಯ  ಇಲ್ಲದ  ಜಾಗ ಹುಡುಕುವುದೆಂದರೆ, ಕಿಸಾಗೌತಮಿ ಸಾವಿಲ್ಲದ ಮನೆಯ  ಸಾಸಿವೆಯ ಹುಡುಕಿ ಹೊರಟಂತೆ. 

ವಿಶ್ವದ  ಅತ್ಯಂತ ಶ್ರೀಮಂತ, ಪ್ರಜಾಪ್ರಭುತ್ವವಿರುವ ದೇಶಗಳಲ್ಲೂ  ತಾರತಮ್ಯ ದ  ಝಳಕುಗಳು ಕಾಣಸಿಗುತ್ತವೆ , ಅಲ್ಲಿಯೂ  ಅಮಾಯಕ ವಲಸಿಗರು ಆ ಬಿಸಿಗೆ ನರಳುವ  ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ನಾಗರೀಕರು  ವಿನಾಕಾರಣ  ಮನುಷ್ಯತ್ವವನ್ನೇ  ಮರೆತು  ಸಮೂಹಸನ್ನಿಗೆ ಒಳಗಾಗುತ್ತಾರೆ  ; ಎಲ್ಲೋ ಹುಟ್ಟುವ ಕಿಡಿ ಇನ್ನೆಲ್ಲೋ ಅನಾಹುತಗಳನ್ನು ಸೃಷ್ಟಿಸುತ್ತದೆ. ಇತಿಹಾಸದ  ಉದ್ದಕ್ಕೂ ಮನುಷ್ಯ ಜನಾಂಗ ಇಂತದ್ದಕ್ಕೆ  ಮೂಕಸಾಕ್ಷಿಯಾಗುತ್ತಲೇ  ಇದೆ. ವಿವೇಕ ಪದೇಪದೇ ಆಕರ್ಷಣೆ ಕಳೆದುಕೊಳ್ಳುತ್ತಿರುತ್ತದೆ. 
ಎಚ್ಚರದ ಮನಸ್ಸುಗಳು ಸದಾ ಜಾಗ್ರತವಾಗಿದ್ದು-  ವಿವೇಕದ ಅಗತ್ಯತೆಯ ಬಗ್ಗೆ, ಸಮಷ್ಠಿ ಪ್ರಜ್ಞೆಯ ಬಗ್ಗೆ, ಕರುಣೆಯ ಮಹತ್ವದ ಬಗ್ಗೆ, ಸಹನೆಯ ಬಗ್ಗೆ, 'ತನ್ನಂತೆ ಪರರ ಬಗೆಯುವ' ಮನೋಧರ್ಮದ  ಬಗ್ಗೆ, ಸಹಬಾಳ್ವೆಯ ಬಗ್ಗೆ,   ಇವೆಲ್ಲ ಮನುಕುಲದ ಮುನ್ನಡೆಗೆ  ಎಷ್ಟು ಅವಶ್ಯ ಹಾಗೂ 'ಪೆರತೇನನೆಸಗಿದರು ' ಅದು ಅವನತಿಯ ಹಾದಿಗೇ ದಾರಿಯಾಗಬಲ್ಲುದು - ಎಂದು ತಿಳಿಯ ಹೇಳುತ್ತಲೇ ಇರಬೇಕು. ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಮನುಷ್ಯನ 'ನಾಶ  ಸಾಮರ್ಥ್ಯ' ಊಹೆಗೂ ನಿಲುಕದಷ್ಟು ಅಗಾಧವಾಗಿರುವಾಗ ಈ ಸಂತತಿಯ ಉಳಿವು ವಿವೇಕವನ್ನೇ ಅವಲಂಬಿಸಿದೆ. 

ಡಾ! ಜಿ.ಕೆ. ಜಯರಾಮ್ ರ  'ದಿ ಕಾಸ್ಟ್ಯೂಮ್ ಪಾರ್ಟಿ ' ಎನ್ನುವ ಇಂಗ್ಲಿಷ್  ನಾಟಕ, 'ಶ್ರದ್ದೆಯಿಂದ  ಗೈದ ಕಾಯಕದಿಂದ' ಮೇಲೆ ಬಂದ,   ಅಮೇರಿಕ ದೇಶದ  ಎರಡು ವಿಭಿನ್ನಸಂಸ್ಕೃತಿಯ (ಒಂದು ದಕ್ಷಿಣ ಭಾರತೀಯ,  ಇನ್ನೊಂದು  ಯಹೂದಿ)  ವಲಸಿಗ  ಕುಟುಂಬಗಳ  ಸುತ್ತ ಹೆಣೆದಿದೆ. ಈ ಎರಡು ಕುಟುಂಬಗಳ ನಡುವೆ    ಹೊಸ ಸಂಬಂಧ ಚಿಗುರುವ ಹೊತ್ತಿನ ಸಂದರ್ಭದ ಸಂಭ್ರಮ , ಸಲ್ಲಾಪ ಗಳ ಸುತ್ತ ಸುಳಿಯುತ್ತ ಈ ನಾಟಕ - ವಲಸಿಗರ ದ್ವಂದ್ವಗಳನ್ನೂ , ಸಂಕಷ್ಟಗಳನ್ನೂ , ಅನುಭವಿಸುವ ಪರಕೀಯತೆಯ ತೊಳಲಾಟಗಳನ್ನೂ ವಿವರಿಸುತ್ತ, ನಿಮಗೆ ವಲಸಿಗರ ಬದುಕಿನ ಒಂದು ನೈಜ ನೋಟವನ್ನು ಕೊಡುತ್ತದೆ . ಅಲ್ಲಿನ ಪಾತ್ರಗಳು - ಆ ಸಮಯದಲ್ಲೇ ಅಲ್ಲಿನ ಅಭೂತಪೂರ್ವ ಅಧ್ಯಕ್ಷೀಯ ಚುನಾವಣೆಯ ತಿರುವುಗಳ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತ, ಸ್ಪಂದಿಸುತ್ತ,  ಅವುಗಳ ನಡುವೆ ವಿಭಿನ್ನ ದ್ರಷ್ಟಿಕೋನಗಳ , ವಿಭಿನ್ನ ಅಭಿರುಚಿಗಳ ಬಗ್ಗೆ  ವಾಗ್ವಾದಗಳೇರ್ಪಟ್ಟು, ಬಿಸಿಯೇರಿಸಿಕೊಂಡು , ಬಳಿಕ ಅಲ್ಲಿನ ಸ್ತ್ರೀ ಪಾತ್ರಗಳ ಸಹನೆ, ವಿವೇಕದ ಕರೆಗೆ ಸ್ಪಂದಿಸಿ ತಣ್ಣಗಾಗುವ, ಹೊಂದಿಕೊಳ್ಳುವ , ಖುಷಿ ಕಂಡುಕೊಳ್ಳುವ ಪರಿ  - ಮನುಷ್ಯ ಸಹಜ  ಎನ್ನಿಸುತ್ತದೆ. ಇಂತಹ  ಒಂದು,  ತಮ್ಮ  ಪರಿಧಿಯೊಳಗೆ ತಮ್ಮ ಪಾಡಿಗೆ  ಬದುಕುವ ಈ ವಲಿಸಿಗ ಕುಟುಂಬಗಳ ಬದುಕು, ಯಾವ ಕಾರ್ಯಕಾರಣ ಸಂಬಂಧಗಳೂ  ಇಲ್ಲದೆ,  ಯಾರದೋ ಪೂರ್ವಾಗ್ರಹದ ಅಸಹನೆಯ ಕಿಡಿಗೆ ಸಿಕ್ಕಿ,  ಹೇಗೆ ಕಮರಬಲ್ಲುದು - ಎನ್ನುವುದು ದಿಗ್ಭ್ರಮೆ ತರಿಸುತ್ತದೆ. 

" ಇವನಾರವ ಇವನಾರವ ಇವನಾರವನೆಂದು ಎನಿಸದಿರಯ್ಯ. ಇವ ನಮ್ಮವ ಇವ ನಮ್ಮವ, ಇವ ನಮ್ಮವನೆಂದು ಎನಿಸಯ್ಯ. ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದು ಎನಿಸಯ್ಯ."  - ಎಂಬ ಬಸವಣ್ಣನ  ಈ ವಚನದ  ವಿವೇಕದ   ಪ್ರಸ್ತುತತೆಯನ್ನು ಈ ನಾಟಕ  ಪ್ರತಿಪಾದಿಸುತ್ತದೆ. 

ಈ ನಾಟಕದ  ಪ್ರಥಮ ಪ್ರದರ್ಶನ ಆಶೀಶ್ ಸೇನ್ ರ ನಿರ್ದೇಶನದಲ್ಲಿ ಬಸವಜಯಂತಿಯಂದೇ  (ಏಪ್ರಿಲ್ ೧೮ರಂದು) ರಂಗಶಂಕರದಲ್ಲಿ  ಹಮ್ಮಿಕೊಂಡಿರುವುದು  ಅತ್ಯಂತ ಸೂಕ್ತವಾಗಿದೆ . (ಏಪ್ರಿಲ್ ೧೯ರಂದು  ಮರುಪ್ರದರ್ಶನಗೊಳ್ಳಲಿದೆ) 

ಸ್ಲಂ ಮಕ್ಕಳಿಗಾಗಿ ನಡೆಸುತ್ತಿರುವ  ಏಕಲವ್ಯ ಆಂಗ್ಲ ಮಾಧ್ಯಮ  ಶಾಲೆಗಳ ಸಹಾಯಾರ್ಥದ ಸದುದ್ದೇಶದಿಂದ  ಪ್ರದರ್ಶನಗೊಳ್ಳುತ್ತಿರುವುದು  ಶ್ಲಾಘನೀಯ. ಮನುಜಕುಲದ 'ಕದಡಿದ ಸಲಿಲಂ' ಗಳ  ತಿಳಿಗೊಳಿಸುವತ್ತ  ಇದೂ ಒಂದು  ಪುಟ್ಟ ಹೆಜ್ಜೆ; ಪಂಪನ  'ಮನುಜಕುಲಂ ತಾನೊಂದೆ ವಲಂ.' ಧ್ಯೇಯವಾಕ್ಯಕ್ಕೆ  ದನಿಗೂಡಿಸುವಂತದ್ದು;  ಪ್ರೋತ್ಸಾಹಿಸಬೇಕಾದದ್ದು. 



- ದಿಟ್ಟಿ

Below given is the English version.
_________________________________________________________________


The Costume Party - Story of Migrants

Migration is happening since millions of years. It happens  mostly for the purpose of filling stomach.
Even after fulfilling that purpose, whether the migrants live in peace is often a doubtful question.
Most of the societies  will be suspicious about migrants. Hence migrants often mentally suffer with alienated, discriminated feelings. Sometimes their next generations too feel the heat. The next generations suffer more since they neither belong here, nor there!   
The reason for discrimination can be anything - it can be color, race, look, stature, language, culture, faith, etc.  Some places there are more discrimination,   some places it is little less.  If you go searching for a place where there is no discrimination - it’s like  Kisa Gauthami  went in search  for fetching Mustard seeds from a house which hasn’t  witnessed any death in their family  - for Buddha.
Even in richest countries in the world, where democracy flourishes, you can find instances of discrimination. Even there once can see incidents where   innocent migrants face the heat of discrimination & suffer. Sometimes the citizens lose their sensibility, fall prey to mob mentality & act in inhuman way.  Some spark lit somewhere will cause damage somewhere else!  Human race has witnessed these kinds of damages done repeatedly all along its history.  Wisdom loses its charm often.
Awakened minds should remain cautious and should caution others  about - the need to develop/retain wisdom, the need to evolve as universal man, the importance of tolerance, empathy towards others, co-living, developing mentality of treating ‘others like us’  - and how these are essential things for prosperity of mankind and anything contrary to this can only lead to downfall of mankind. This often needs to be preached.  In this modern age - that too, when the man’s power of ‘destruction’ has grown beyond imagination, only this wisdom can save the mankind.
Dr. GK Jayaram’s  English play ‘The Costume Party’ is woven around the story of two immigrant families of different cultures (one South Indian another Jewish).  Both families have come up by hard work. The play narrates the occasion when these two families are about to develop new relationship between them, where there was a sense of festivity, joy, dialogues. The occasion starts opening up their thoughts revealing migrants dilemma’s, difficulties they face in their neighborhood, the sense of alienation, identity issue, the question they often face- where do they really belong to - thus giving us the a real insight into migrants life. It also reveals us their prejudices, their views about other cultures, as the actors in the play starts debating among them.  The occasion also happens to witness the presidential election results being declared where there was hope of making history by choosing an woman. As the debates turn hotter & hotter disturbing the friendship & warmth among them, the famale characters bring peace by convincing others of the need to  be tolerant and be sensible and the need to show respect to others who have the right have their own views & opinions (which is often the case in most societies).  They settle to gracefully agree to disagree with other’s point of view and further their friendship & warmth among them and turn the occasion to a joyful one with dance, wine & dine. How these migrant families which live within their boundaries without causing any disturbances in the neighborhood , can be hurt by the - spark of intolerance of someone without any reason - shocks us.
The play points us to relevance of the following verses of 12th century reformer Basavanna.
“Oh Lord, please do not say 'whose is he, whose is he, whose is he?'
Please say 'he is ours, he is ours, he is ours!'
Oh Lord Kudalasangama, consider me a son of your own house!”
It’s apt that the play is debuting with the direction of Ashish Sen  at Rangashankar on  ‘Basava Jayanthi’ - the birthday of Basavanna on 18th April 2018 (19th is the replay of it)
The play is being staged  with the noble cause  of helping the English medium Ekalavya  Schools educating slum children - which is commendable.
It’s small step towards clearing the muddy water pools of mankind. It also adds its voice to the  slogan of renowned Kannada poet of tenth century - Pampa  “Whole Mankind is one race”  . isn’t it worth encouraging?






No comments: