Saturday, June 15, 2024

Tribute to Radha Teacher

 Tribute to Radha teacher

(ರಾಧಾ ಟೀಚರ್ ಗೆ ಶ್ರದ್ಧಾಂಜಲಿ)



Radhamma S. Shetty Tekkatte (Born in 1939) fondly called as 'Radha Teacher' passed away on 20,May 2024.
An event to pay tribute to her was held on 02June2024 at Sahana Convention Center at Koteshwara. It was well attended by many well-wishers. 

Here are few clips recorded during the event. 
Clip1 (Tribute by Dinesh, Karunakar, etc.)
Clip2  (Tribute by Ganesh, etc.)

Here are some pictures from the event & from Radha teacher's life.


Below is the script of tribute by her son  Dinesh(translated to English too).

_______________________________________________________________________

ರಾಧಾ ಟೀಚರ್ ಗೆ  ಶ್ರದ್ಧಾಂಜಲಿ

 

ರಾಧಾ ಟೀಚರ್ ಎಂದೇ ಹಲವರಿಗೆ ಪರಿಚಿತರಾದ ನಿವೃತ್ತ ಶಿಕ್ಷಕಿ  ತೆಕ್ಕಟ್ಟೆ ಪಟೇಲರ ಮನೆ ರಾಧಮ್ಮ ಎಸ್  ಶೆಟ್ಟಿ -   ಯವರ ಸ್ಮರಣೆಗಾಗಿ ಇಂದು ಏರ್ಪಡಿಸಿರುವ 'ಶ್ರದ್ಧಾಂಜಲಿ ಸಭೆ' ಹಾಗೂ ವೈಕುಂಠ ಸಮಾರಾಧನೆಗೆ  ಆಗಮಿಸಿದ ಆತ್ಮೀಯರಿಗೆಲ್ಲ ಸ್ವಾಗತ.

ಯಕ್ಷಗಾನದಲ್ಲಿ ಬರುವ ಪ್ರಸಿದ್ಧ ಹಾಡಿನ ಸೊಲ್ಲೊಂದು ಹೀಗಿದೆ - "ಹೇಳಲಾರೆನೋ ರಂಗಾ, ಹೇಳದುಳಿಯಲಾರೆನೋ ರಂಗ".
ನನ್ನ  ಪರಿಸ್ಥಿತಿ  ಈಗ  ಸ್ವಲ್ಪ ಹಾಗೆಯೇ  ಇದೆ. ರಾಧಾ ಟೀಚರ್ ಬಗ್ಗೆ ಮಾತನಾಡುವುದು ಮಗನಾದ ನನಗೆ ಭಾವನಾತ್ಮಕ ವಿಷಯವಾಗಿರುವುದರಿಂದ ಕಷ್ಟ. ಹಾಗೆಯೇ
ಹೇಳದಿದ್ದರೆ ಅದೂ ಈ ಸಂದರ್ಭದಲ್ಲೂ ಹೇಳದಿದ್ದರೆ ಇನ್ನು ಯಾವಾಗ ಹೇಳುವುದು? ಎಂಬ ಸಂಕಟವುಂಟು.

ಮೊದಲಿಗೆ ರಾಧಾ ಟೀಚರ್ ರ ಜೀವಿತದ ಕುರಿತಾಗಿ ಕೆಲವು ವಿವರಗಳನ್ನು ನಿಮ್ಮ ಮುಂದಿಡುತ್ತೇನೆ.
ಹಳ್ನಾಡು ನಾರಾಯಣ ಶೆಟ್ರು ಮತ್ತು ತೆಕ್ಕಟ್ಟೆ ಪಟೇಲರಮನೆ ಮಂಜಮ್ಮ ಶೆಡ್ತಿಯವರ ಐದು ಮಕ್ಕಳಲ್ಲಿ ಮೂರನೆಯವರಾಗಿ  ೧೯೩೯ ನೇ ಇಸವಿ ಆಗಸ್ಟ್ ತಿಂಗಳಲ್ಲಿ ತೆಕ್ಕಟ್ಟೆಯಲ್ಲಿ ಜನಿಸಿದ  ರಾಧಾ ಟೀಚರ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೆಕ್ಕಟ್ಟೆಯಲ್ಲಿ ಮುಗಿಸಿ ಹೈಸ್ಕೂಲ್ ವಿದ್ಯಾಭ್ಯಾಸವನ್ನು
ಬೆಂಗಳೂರು ಮತ್ತು  ಮೈಸೂರಿನಲ್ಲಿ  ಮುಗಿಸಿ ಬಳಿಕ ಉಡುಪಿಯಲ್ಲಿ ಶಿಕ್ಷಕ ತರಬೇತಿ ಪಡೆದು ೧೯೬೪ರಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಕುಂದಾಪುರ ತಾಲೂಕಿನ ಹೊಸಂಗಡಿ ಸಮೀಪದ ಹೆನ್ನಾಬೈಲ್ ಎಂಬಲ್ಲಿನ ಶಾಲೆಯಲ್ಲಿ ಆರಂಭಿಸಿದರು. ೧೯೬೬ರಲ್ಲಿ ಎಚ್. ಸುಬ್ಬಣ್ಣ ಶೆಟ್ಟರನ್ನು ವಿವಾಹವಾಗಿ ೧೯೬೭ರಲ್ಲಿ ಮೊದಲ ಮಗುವಿನ ತಾಯಿಯಾಗಿ ಆ ಸಮಯದಲ್ಲೇ ಬಿದ್ಕಲ್ಕಟ್ಟೆಯಲ್ಲಿ ಹೊಸದಾಗಿ ತೆರೆದ ಸರಕಾರಿ ಪ್ರಾಥಮಿಕ ಶಾಲೆಯ ಮೊದಲ ಶಿಕ್ಷಕಿಯಾಗಿ ಹತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ೧೯೭೦ರಲ್ಲಿ ಪತಿ ಸುಬ್ಬಣ್ಣ ಶೆಟ್ಟರು ಕೂಡ ಆ ಶಾಲೆಗೆ  ವರ್ಗವಾಗಿ ಬಂದರು. ಸುತ್ತಮುತ್ತಲ ಗ್ರಾಮದ ಮನೆಮನೆಗೂ ವರುಷ ವರುಷವೂ  ಖಾನೀಸುಮಾರಿಗಾಗಿ ಭೇಟಿಕೊಟ್ಟು ಎಳೆಯ ಕಂದಮ್ಮಗಳ ವಿವರ ಸಂಗ್ರಹಿಸಿ  ಪೋಷಕರನ್ನು ಕಂದಮ್ಮಗಳನ್ನು ಶಾಲೆಗೆ ಕಳುಹಿಸುವಂತೆ ಮನವೊಲಿಸಿ ಅವುಗಳನ್ನು ಶಾಲೆಗೆ ದಾಖಲಿಸಿಕೊಂಡು ಅಕ್ಷರಾಭ್ಯಾಸದ ದೀಕ್ಷೆ ಕೊಡಿಸುವ ಕೆಲಸವನ್ನು ನಿರಂತರವಾಗಿ ಮಾಡಿದರು.
 ೧೯೭೭ರಲ್ಲಿ ವರ್ಗವಾಗಿ ತೆಕ್ಕಟ್ಟೆ ಶಾಲೆಗೆ ಹೋಗಿ ಬಳಿಕ ೧೯೭೯ರಲ್ಲಿ ಅಲ್ಲಿಂದ ಯಡಾಡಿ ಮತ್ಯಾಡಿ ಗ್ರಾಮದ ಗುಡ್ಡೆಅಂಗಡಿ ಶಾಲೆಗೆ ವರ್ಗವಾಗಿ ಅಲ್ಲಿ ೧೯೮೬ರ ವರೆಗೂ ಕೆಲಸ ಮಾಡಿ ಬಳಿಕ ಸ್ವಯಂನಿವೃತ್ತಿ ಪಡೆದರು.

ಹೆತ್ತದ್ದು ನಾಲ್ಕಾದರೂ ರಾಧಾ ಟೀಚರ್ ಹಲವು ಮಕ್ಕಳ ತಾಯಿ. ಸುತ್ತಮುತ್ತಲ ತಂದೆತಾಯಿಯರು ತಮ್ಮ ಎಳೆಕಂದಮ್ಮಗಳನ್ನು ಕರೆತಂದು ಶಾಲೆಗೆ ಸೇರಿಸಿ (ವಿ. ಸೀ ಅವರ ಕವನದಂತೆ )'ಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು ನಿಮ್ಮ ಮಡಿಲೊಳಗಿರಲು ತಂದಿರುವೆವು" ಎಂದು ಬಿಟ್ಟು ಹೋದರೆ ಆ ಮಕ್ಕಳೆಲ್ಲರನ್ನೂ ಲಾಲಿಸಿ ಹುರಿದುಂಬಿಸಿ ಅವರೆದೆಯಲ್ಲಿ ಅಕ್ಷರವ ಬಿತ್ತುವ ಕಾಯಕಕ್ಕೆ ತೊಡಗಿಕೊಂಡು ಅವುಗಳ ತೊದಲು ನುಡಿಗಳನ್ನು ತಿದ್ದಿ ತೀಡಿ ಬೆಳೆಸುವ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡು ಅವುಗಳ ರೆಕ್ಕೆ ಬಲಿಯುವ ತನಕ ಆಕೆ ಅವರಿಗೆ ಎರಡನೇ ತಾಯಿಯಾಗಿರುತ್ತಿದ್ದರು.

ಕನಕ ದಾಸರು ಹೇಳುವ ಹಾಗೆ " ಗಿಳಿಯ ಮರಿಯನು ತಂದು ಪಂಜರದೊಳಗೆ  ಪೋಷಿಸಿ ಕಲಿಸಿ ಮೃದು ನುಡಿಗಳನು ಲಾಲಿಸಿ  ಕೇಳ್ವ ಪರಿಣತರಂತೆಯೂ ಮತಿಯನು ತಿಳುಹಿ, ಜಿಹ್ವೆಗೆ  ಮೊಳಗುವಂದದಿ ಅಕ್ಷರಮಾಲೆ ಯನ್ನಿತ್ತು ಅನವರತ   ರಕ್ಷಿಸುವವರಾಗಿ" ಕೆಲಸ ಮಾಡುತ್ತಿದ್ದರು

ಕೆಲವು - ಭಯದಿಂದ ಮುದುಡಿಕೊಂಡಿರುತ್ತಿದ್ದ ಮಕ್ಕಳನ್ನು ಮನೆಗೆ ಕೊಂಡೊಯ್ದು ಪ್ರೀತಿಯಿಂದ ಉಣಬಡಿಸುತ್ತಿದ್ದದ್ದೂ ಉಂಟು. ತಂಗಳನ್ನ ತರುತ್ತಿದ್ದ ಕೆಲವು  ಮಕ್ಕಳಿಗೆ ಬಿಸಿ  ಬಿಸಿಯಾದ ಪದಾರ್ಥ /ಸಾಂಬಾರ್ ಬಡಿಸಿದ್ದೂ ಉಂಟು. ತನ್ನ ಕೆಲವು ಸಂಬಂಧಿಕರ ಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿದ್ದುಂಟು. ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಮಮತೆ ತೋರುತ್ತಿದ್ದ ಆಕೆ ಅವರಿಗೆಲ್ಲ ಹಾಡು ಕುಣಿತ ಕಲಿಸಿ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ವರ್ಣಮಯ ಲೋಕ ಸೃಷ್ಠಿಸಿ,   ಮಕ್ಕಳ ಕಲ್ಪನಾಲೋಕಕ್ಕೆ ರೆಕ್ಕೆಕಟ್ಟಿ ಕೊಡುತ್ತಿದ್ದರು.

 ಆಕೆಯ ವಾತ್ಸಲ್ಯ ಚಂದ್ರಿಕೆಯಲ್ಲಿ ಮಿಂದ ಹಲವು ಮಕ್ಕಳು ನಲಿಯುತ್ತ, ಕುಣಿಯುತ್ತ ತಿಳುವಳಿಕೆ ಹೆಚ್ಚಿಸಿಕೊಳ್ಳುತ್ತ ಅರಳುತ್ತ ಬಿರಿಯುತ್ತ ಪ್ರಬುದ್ಧರಾಗಿ ಬೆಳೆದು ಉತ್ತಮ ನಾಗರೀಕರಾಗಿ ಏಳ್ಗತಿ   ಪಡೆದಿದ್ದಾರೆ.

 ಅವರಲ್ಲಿ ಕೆಲವರು ಎಷ್ಟೋ ಕಾಲದ ನಂತರವೂ ಹೀಗೆ ನೆನೆಯುವುದು ಉಂಟು.

"ಬೆಳಗಾತ ನಾನೆದ್ದು ಯಾರ್ಯಾರ ನೆನೆಯಲಿ ಅಕ್ಷರ ಕಲಿಸಿದ ರಾಧಮ್ಮ । ಟೀಚರ್ ರ

ಎದ್ದೊಂದು ಗಳಿಗೆ ನೆನದೇನ "

ಅವರ ಮೇಲ್ಪಂಕ್ತಿ ಅನುಸರಿಸಿ ಶಿಷ್ಯ ವ್ರಂದದ ಕೆಲವರು ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡು ಯಶಸ್ವೀ ಶಿಕ್ಷಕರಾಗಿದ್ದಾರೆ. ಎಳೆಯರ ಎದೆಗೆ ಅಕ್ಷರ ಬಿತ್ತುವ ಪುಣ್ಯಕಾಯಕವನ್ನು ಮುಂದುವರಿಸುತ್ತಿದ್ದಾರೆ.

 

ಇವರೆಲ್ಲರೂ ನಮ್ಮ ನಲ್ಮೆಯ ಕವಿ ಗೋಪಾಲಕೃಷ್ಣ ಅಡಿಗರು ಹೇಳುವಂತೆ ' ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ

ಸಮಬಗೆಯ ಸಮಸುಖದ ಸಮದುಃಖದ ಸಾಮರಸ್ಯದ ಸಾಮಗಾನಲಹರಿಯ ಮೇಲೆ     ಹೊಸನಾಡೊಂದನ್ನು , ರಸದ ಬೀಡೊಂದನ್ನು ಸುಖದ ಬೀಡೊಂದನ್ನು ಕಟ್ಟುತ್ತಾರೆ" ಎಂದು ಆಶಿಸೋಣ.

 

ರಾಧಾ ಟೀಚರ್ ರ ಪತಿ ಸುಬ್ಬಣ್ಣ ಮಾಸ್ಟ್ರು ಕೂಡ  ಬಹಳ ದೊಡ್ಡ ಶಿಷ್ಯವ್ರಂದವನ್ನು ಹೊಂದಿದವರಾಗಿದ್ದಾರೆ. ಬಿದ್ಕಲ್ಕಟ್ಟೆ ಶಾಲೆಯಲ್ಲಿ ಸುಮಾರು   ಏಳು ವರ್ಷದ  ಕಾಲ ಸೇವೆ ಸಲ್ಲಿಸಿ ಪತ್ನಿಯೊಂದಿಗೆ ಮತ್ತು ಹಲವಾರು ಸಹಶಿಕ್ಷಕರೊಂದಿಗೆ ಶಾಲೆಯ ಏಳ್ಗೆಗೆ ಶ್ರಮಿಸಿದುದರಿಂದ ಸುತ್ತುಮುತ್ತಲಿನ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ  ಶಾಲೆ ಎಂದು ಹೆಸರುಗಳಿಸಲ್ಪಟ್ಟಿತು.

 

ರಾಧಾ ಟೀಚರ್ ರ ಸಾಂಸಾರಿಕ ಜೀವನದ ವಿವರಗಳು ಹೀಗಿವೆ - ಅವರಿಗೆ ನಾಲ್ವರು ಮಕ್ಕಳು. ಮೊದಲಿಗೆ ಮೂರು ಗಂಡು ಮಕ್ಕಳು. ಎಲ್ಲರೂ ಈಶರೇ - ದಿನೇಶ, ಗಣೇಶ ಮತ್ತು ರಮೇಶ. ಕೊನೆಯವಳು ಪದ್ಮಲತಾ. ಹಿರಿಯವ ದಿನೇಶ,  ಕಂಪ್ಯೂಟರ್ ಸೈನ್ಸ್ ನಲ್ಲಿ  MSc. ಮಾಡಿ ಬಳಿಕ DRDO ಭಾಗವಾದ  Instruments Research and Development Estblishment(IRDE) ನಲ್ಲಿ ವಿಜ್ಞಾನಿಯಾಗಿ ಡೆಹ್ರಾಡೂನ್ ನಲ್ಲಿ ೫ ವರ್ಷಗಳ ಕಾಲ ಕೆಲಸ ಮಾಡಿ ಬಳಿಕ ಬೆಂಗಳೂರಿನಲ್ಲಿ ಇನ್ಫೋಸಿಸ್ ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಸೇರಿ ೧೫ ವರ್ಷಗಳ ಕಾಲ ದುಡಿದು ಬಳಿಕ ಒಂದು  ಚಾರಿಟಿ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದಾನೆ. ಆತ ಬ್ರಹ್ಮಚಾರಿಯಾಗಿ ಉಳಿದಿದ್ದಾನೆ.  ಎರಡನೇ ಮಗ ಗಣೇಶ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ,  ಮೊದಲಿಗೆ ಕೆಲಕಾಲ Lecture ಕೆಲಸಕ್ಕೆ ಸೇರಿ ಭಟ್ಕಳ Anjuman ,ನಿಟ್ಟೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೆಲಸ ಮಾಡಿ ಬಳಿಕ ಬೆಂಗಳೂರಿನಲ್ಲಿ  Microcon,   Bosch, Sage ಇತ್ಯಾದಿ company  ಗಳಲ್ಲಿ ಕೆಲಸ ಮಾಡಿ ಬಳಿಕ ಅಮೆರಿಕಕ್ಕೆ ಹೋಗಿ ಅಲ್ಲಿಯೇ ನೆಲೆಸಿರುತ್ತಾನೆ. ಆತನ ಪತ್ನಿ ರೂಪಾ - ಇಂಜಿನಿಯರಿಂಗ್ ಪದವೀಧರೆ, ಅಮೇರಿಕಾದಲ್ಲಿ ಸದ್ಯ Apple ಕಂಪನಿಗೆ ಕೆಲಸ ಮಾಡುತ್ತಿದ್ದಾಳೆ. ಇವರ ಮಗಳು ರಿಶಾ ಸದ್ಯ ಬಿಸಿನೆಸ್ ಡಿಗ್ರಿ ಗಾಗಿ  ನ್ಯೂಯೋರ್ಕ್ ನಲ್ಲಿನ  Stern School of Business ನಲ್ಲಿ ಕಲಿಯುತ್ತಿದ್ದಾಳೆ. ಕಿರಿಯ ಮಗ ರಮೇಶ ಮೆಕ್ಯಾನಿಕಲ್ ಡಿಪ್ಲೋಮ ಓದಿ ತಂದೆತಾಯಿಗೆ ನೆರಳಾಗಿ ಹುಣಸೆಮಕ್ಕಿಯಲ್ಲಿಯೇ ನೆಲೆಸಿ  'ಪ್ರಗತಿ ಫೈನಾನ್ಸ್' ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾನೆ ಮತ್ತು ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾನೆ. ಪತ್ನಿ ಪವಿತ್ರ ಬಿಕಾಂ ಪದವೀಧರೆ, ಹುಣಸೆಮಕ್ಕಿಯಲ್ಲಿ ನೆಲೆಸಿ ಅತ್ತೆ ಮಾವಂದಿರ ಆರೋಗ್ಯದ ಕಾಳಜಿ ವಹಿಸುತ್ತಲೇ ಮಕ್ಕಳ ವಿದ್ಯಾಭ್ಯಾಸದ ಉಸ್ತುವಾರಿ ವಹಿಸಿದ್ದಾಳೆ. ಅವರ ಹಿರಿಯಮಗಳು ಚೆಲ್ವಿ ಈಗ ಬೆಂಗಳೂರಿನ ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ  ಕಂಪ್ಯೂಟರ್ ಸೈನ್ಸ್ ಅಂಡ್ ಡಿಸೈನ್ ವಿಷಯದಲ್ಲಿ ಇಂಜಿನಿಯರಿಂಗ್ ಡಿಗ್ರಿಗಾಗಿ ಓದುತ್ತಿದ್ದರೆ ಎರಡನೆಯವಳು 'ಸುರ್ವಿ'  ವಕ್ವಾಡಿಯ  ಗುರುಕುಲ   ಶಾಲೆಯಲ್ಲಿ SSLC ಮುಗಿಸಿ ಸುಣ್ಣಾರಿಯ Excellentಗೆ  PU ಕ್ಲಾಸ್ ಗೆ  ಸೇರಿದ್ದಾಳೆ. ರಾಧಾ ಟೀಚರ್ ರ ಕೊನೆಯ ಹಾಗೂ ಏಕೈಕ ಮಗಳು ಪದ್ಮಲತಾ ಬುದ್ದಿಮಾಂದ್ಯದ ಶಿಶುವಾಗಿ ಜನಿಸಿ ದೀರ್ಘಕಾಲದ ಮಗುವಿನಂತೆ ನಲವತ್ತೊಂದು ವರ್ಷ ಬದುಕಿ ೨೦೧೯ರಲ್ಲಿ ತೀರಿಕೊಂಡಿದ್ದಾಳೆ.

 

ಸಂಸ್ಕ್ರತ ದ  ಸುಭಾಷಿತವೊಂದರಲ್ಲಿ ಹೀಗೆ ಹೇಳುತ್ತಾರೆ

सुखमापतितं सेव्यं दुःखमापतितं तथा चक्रवत् परिवर्तन्ते दुःखानि सुखानि ।।

Sukhamaapatitam seyam  Duhkhamaapatitam tathaa

Chakravat parivartante  Duhkhaani ca sukham ca

ಅರ್ಥಾತ್  ಸುಖ ಬಂದರೆ ಸ್ವೀಕರಿಸು ಹಾಗೆ ದುಃಖ ಬಂದರೂ ಅದೇ ಸಮಭಾವದಿಂದ ಸ್ವೀಕರಿಸು. ಸುಖದುಃಖಗಳು ಒಂದರ ಹಿಂದೆ ಇನ್ನೊಂದು ಚಕ್ರತಿರುಗುವ ಹಾಗೆ ಬರುತ್ತಲೇ ಇರುತ್ತವೆ.  ಆದರೆ ಕೆಲವರ ಬದುಕಿನಲ್ಲಿ ಸುಖದುಃಖದ ಚಕ್ರ  ತಿರುಗದೆ ದುಃಖದ ಭಾಗವೇ ದೀರ್ಘ ಕಾಲ ಉಳಿದು ಬಿಡುತ್ತದೆ. ಆಗ ಬಾಳು ದುಸ್ತರವೆನಿಸುತ್ತದೆ. ರಾಧಾ ಟೀಚರ್ ಜೀವನದಲ್ಲಿ   ಸುಖದ ಕ್ಷಣಗಳು ಬಹಳ ಕಡಿಮೆಯೆಂದೇ  ಹೇಳಬಹುದು.

 

ಡಿವಿಜಿ ತಮ್ಮ ಕಗ್ಗದಲ್ಲೊಂದು ಕಡೆ ಹೀಗೆ ಉಪದೇಶಿಸುತ್ತಾರೆ : ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ. ಬೆಲ್ಲ-ಸಕ್ಕರೆಯಾಗು ದೀನದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ

 

ರಾಧಾ ಟೀಚರ್ ಜೀವನದಲ್ಲಿ  ಕಷ್ಟಗಳ ಮಳೆ ಸುರಿಯಿತು. ಬಹಳ ದೈರ್ಯವಂತೆಯಾಗಿದ್ದ ಆಕೆ ಬಹುತೇಕ ಕಷ್ಟಗಳನ್ನು ಕಲ್ಲಿನಂತೆ ಎದುರಿಸಿದರು. ಜನಪದರ ಹಾಡಿನ ಸೊಲ್ಲು "ಕೋಟಿ ಕೋಟಿ ಬಾಧೆಗಳಲ್ಲಿ ಲಕ್ಷಾಂತರ ನೋವುಗಳಲ್ಲಿ ನೀ ಹುಟ್ಟಿ ಬೆಳೆದೇ ಯವ್ವ" ಇಂತವರನ್ನು ನೋಡಿಯೇ ಹುಟ್ಟಿಕೊಂಡಿರಬೇಕು.
ಆಕೆ ಪ್ರಾಥಮಿಕ ಶಿಕ್ಷಣ ಮುಗಿಸುವ ಹೊತ್ತಿಗೆ ಶಿಕ್ಷಕರಾಗಿದ್ದ ಆಕೆಯ ಪ್ರೀತಿಯ  ಅಣ್ಣ  ಮನೆ ಬಿಟ್ಟು ಹೋದಾಗ, ಅವರು ಬದುಕಿರುವ ಬಗ್ಗೆ ಸುಳಿವೂ ಸಿಗದೇ  ಅವರ  ಸಂಸಾರ ಕಂಗಾಲಾಗಿ ವಿದ್ಯಾಭ್ಯಾಸ ನಿಲ್ಲಿಸಲ್ಪಟ್ಟಿತು.  ಸನ್ಯಾಸಿಯಾಗಲು ಹೋಗಿದ್ದ ಅವರ ಅಣ್ಣ ಎರಡು ವರ್ಷಗಳ ನಂತರ  ತಿರುಗಿ ಬಂದ  ಬಳಿಕ  ಅವರ ಸಹಾಯದಿಂದ  ವಿದ್ಯಾಭ್ಯಾಸ ಬೆಂಗಳೂರು ಮತ್ತು  ಮೈಸೂರಿನಲ್ಲಿ  ಮುಂದುವರಿಸಲ್ಪಟ್ಟಿತು. ಮುಂದೆ ಶಿಕ್ಷಕರಾಗಿ ಕೆಲಸ ಸೇರಿಕೊಳ್ಳುತ್ತಲೇ ತಂದೆಯನ್ನು ಕಳೆದುಕೊಂಡರು. ಮದುವೆಯಾಗಿ ಒಂದೆರಡು ಮಕ್ಕಳಾಗುತ್ತಲೇ ಒಡಹುಟ್ಟಿದವರಿಗೆ ಆಧಾರವಾಗಿದ್ದ ಅಣ್ಣನನ್ನು ಕಳೆದುಕೊಂಡರು. ತನ್ನ ಮೂರನೆಯ ಮಗುವಿನ ತೊಟ್ಟಿಲು ಶಾಸ್ತ್ರದ ದಿನವೇ ಅಮ್ಮನನ್ನು ಕಳೆದುಕೊಂಡರು. ಸದಾ ಹೆಣ್ಣು ಮಗುವಿಗಾಗಿ ಹಂಬಲಿಸುತ್ತಿದ್ದಾಕೆಗೆ ನಾಲ್ಕನೇ ಮಗುವಾಗಿ ಹೆಣ್ಣು ಹುಟ್ಟಿದ್ದು ಸಂತಸ ತಂದರೂ ಆ ಮಗುವು ಬುದ್ದಿಮಾಂದ್ಯದ ಮಗುವಾಗಿ ಹುಟ್ಟಿ ಆಕೆಯ ಆರೈಕೆಗಾಗಿ ಉಳಿದ ಜೀವನವೆಲ್ಲ ತೇದು ಸೋತು ಸುಣ್ಣಾಗಬೇಕಾಯಿತು.

 

ವಿಶೇಷ ಚೇತನ ಮಕ್ಕಳ ಪಾಲನೆಗೆ ಬೇಕಾದ ಪೂರಕ ವಾತಾವರಣ ನಮ್ಮ ದೇಶದಲ್ಲಿ ಇರದೇ ಇರುವುದರಿಂದ ಅಂಥಾ ಮಕ್ಕಳ ಪಾಲಕರು ವಿಪರೀತ ಒತ್ತಡಕ್ಕೆ ಒಳಗಾಗುತ್ತಾರೆ. ಸಮಾಜ ಅಂತಹ ಮಕ್ಕಳನ್ನು ದೂರವಿಡಲು ಪ್ರಯತ್ನಿಸುತ್ತದೆ. ಆ ಪೋಷಕರ ಗೋಳನ್ನು ಉಳಿದವರು ಅರ್ಥಮಾಡಿಕೊಳ್ಳುವುದು ಕಡಿಮೆ. ಪೋಷಕರ  ಬದುಕು ನರಕದ ಬದುಕಾಗುತ್ತದೆ. ನೂರಾರು ಮಕ್ಕಳಿಗೆ ಅಕ್ಷರ ಕಲಿಸಿದ ರಾಧಾ ಟೀಚರ್ ಗೆ ತನ್ನ ಮಗಳಿಗೆ ಅಕ್ಷರ ಕಲಿಸಲಾಗಲಿಲ್ಲ. ಎಷ್ಟೇ ಬಾರಿ ಹೇಳಿಕೊಟ್ಟರೂ ಅದು ಆಕೆಯ ನೆನಪಿನಲ್ಲಿ ಉಳಿಯುತ್ತಿರಲಿಲ್ಲ. ದಶಕಗಳ ಕಾಲ ನಿರಂತರ ಎಡೆಬಿಡದೆ ತ್ರಿವಿಕ್ರಮನಂತೆ ಪ್ರಯತ್ನಿಸುತ್ತಲೇ ಇದ್ದರೂ ಪ್ರಯೋಜನವಾಗಲಿಲ್ಲ. ಅದೊಂದು ಜೀರ್ಣಿಸಲಾಗದ ದೊಡ್ಡ ಸೋಲಾಗಿತ್ತು! ಮಗಳನ್ನು ನೋಡಿಕೊಳ್ಳುದಕ್ಕಾಗಿಯೇ ಆಕೆ ತನ್ನ ನೆಚ್ಚಿನ ಶಿಕ್ಷಕಿ ಕೆಲಸ ಬಿಟ್ಟುಬಿಡಬೇಕಾಯಿತು. ದೇಹದಾರೋಗ್ಯವೂ ಸರಿಯಿಲ್ಲದೆ ಆತಂಕಗಳು ಹೆಚ್ಚಾಗುತ್ತಾ ಸಾಗಿ ಆಕೆಯ ಮಾನಸಿಕ ಆರೋಗ್ಯವೂ ಕೆಡಲಾರಂಭಿಸಿತು. ನಿದ್ರಾಹೀನತೆಯೂ ಕಾಡಲಾರಂಭಿಸಿತು.  Anxiety disorder ಎಂಬ ಮಾನಸಿಕ ಕಾಯಿಲೆಗೆ ತುತ್ತಾದರು. ಈ ಆತಂಕದ ರೋಗದಿಂದ ಇನ್ನೊಬ್ಬರನ್ನು ಅನುಮಾನಿಸತೊಡಗಿ, ನಮ್ಮ ನೆರೆಹೊರೆಯವರಲ್ಲಿ ಕೆಲವರು, ಬಂಧುಗಳು ಕೂಡ ಕಿರಿಕಿರಿ, ನೋವನ್ನು ಅನುಭವಿಸುವಂತಾಯ್ತು.

 

ರಾಧಾ ಟೀಚರ್ ಮೂಢನಂಬಿಕೆಗಳಿಗೆ ಸೊಪ್ಪು ಹಾಕುತ್ತಿರಲಿಲ್ಲ. ತನ್ನ ಸಂಕಷ್ಟಗಳಿಗೆ   ದೇವರು ದಿಂಡರನ್ನು ದೂರುವವರಾಗಿರಲಿಲ್ಲ. 'ಈಸಬೇಕು ಇದ್ದು ಜಯಿಸಬೇಕು' ಎಂಬ ಸಿದ್ಧಾಂತ ನಂಬಿ ಜೀವ   ತೇದರು ವೃತ್ತಿಗಾಗಿ, ಸಂಸಾರದ ಏಳಿಗೆಗಾಗಿ. ಆಕೆಯ ಜೀವನದ ಕೊನೆಯ ಎರಡು ದಶಕಗಳ ಕಾಲ ಜೀವ ಹಿಂಡುವ ಉಬ್ಬಸದ ಕಾಯಿಲೆ ಅರ್ಥಾತ್ ಆಸ್ತ್ಮ ಕಾಯಿಲೆಯಿಂದ  ನರಳಿದರು. ಐದು ವರ್ಷದ ಹಿಂದೆ ತನ್ನ ಮಗಳನ್ನು ಕಳೆದುಕೊಳ್ಳುವ ಆಘಾತಕ್ಕೊಳಗಾದರು. ಒಡಹುಟ್ಟಿದವರೆಲ್ಲ ಒಬ್ಬೊಬ್ಬರಾಗಿ ತೀರಿಕೊಂಡು ಕೊನೆಯವರಾದರು.

ಅಣ್ಣ ನರಸಿಂಹ ಶೆಟ್ರು  ೧೯೬೯ರಲ್ಲಿ, ಅಕ್ಕ ಸಾದಮ್ಮ ೨೦೧೩, ಕಿರಿಯ ತಮ್ಮ ಶಂಕರ ಮಾಸ್ಟ್ರು ೨೦೧೬, ತಮ್ಮ ರಾಜು ಮಾಸ್ಟ್ರು ೨೦೨೩ರಲ್ಲಿ ತೀರಿಕೊಂಡರು.

ವೈದ್ಯಕೀಯ ಲೋಕದಲ್ಲಾದ ಪ್ರಗತಿಯಿಂದಾಗಿ ಅಂತಹ ತೀವ್ರ ಕಾಯಿಲೆಗಳಿದ್ದರೂ ರಾಧಾ ಟೀಚರ್ ದೀರ್ಘ ಕಾಲದವರೆಗೆ ಬದುಕಿರಲು ಸಾಧ್ಯವಾಯಿತು ಎನ್ನಬಹುದು. ಮುಖ್ಯವಾಗಿ  ದೀರ್ಘಕಾಲ ಚಿಕಿತ್ಸೆ ಕೊಟ್ಟಿದ್ದ pulmonary doctor Dr Aswini Kumar Mohapatra ಮತ್ತು ಮನೋವೈದ್ಯರಾದ Dr. Shripati M Bhat ಮತ್ತೆ  ಮೂಳೆ ತಜ್ಞ ದಿನೇಶ್ ಹಾಗೂ  ಪ್ರದೀಪ್, ಮೋಹನ್ ಕಾಮತ್, ಗಣೇಶ್ ಕಾಮತ್  ಇವರಿಗೆ ಕೃತಜ್ಞತೆ ಹೇಳಬೇಕು. ಹಾಗೆಯೇ ಅವರನ್ನು ಮುತುವರ್ಜಿಯಿಂದ  ನೋಡಿಕೊಂಡಿದ್ದ ಪತಿ, ಕಿರಿಯ ಮಗ ರಮೇಶ ಮತ್ತು ಆತನ ಮನದನ್ನೆ ಪವಿತ್ರಾ, ಆಗಾಗ್ಗೆ ಸಹಾಯ ಮಾಡುತ್ತಿದ್ದ ಸುತ್ತುಮುತ್ತಲ ಮನೆಯವರಿಗೆ ಆಕೆಯನ್ನು ಕಾಪಾಡಿಕೊಂಡ ಶ್ರೇಯ ಸಲ್ಲುತ್ತದೆ.

 

ರಾಧಾ ಟೀಚರ್ ಜೀವನದಲ್ಲಿ ಸಂತಸದ ಕ್ಷಣಗಳಿಲ್ಲ ಎಂದು ಹೇಳಲಾಗದು. ಸದ್ಗುಣ ಸಂಪನ್ನ ಪತಿ, ಉತ್ತಮ ಶಿಷ್ಯಗಣ, ನೆಚ್ಚಿನ ಸೋದರಿ -ಸೋದರರು, ತಕ್ಕ ಮಟ್ಟಿಗೆ ಉತ್ತಮ ವಿದ್ಯಾಭ್ಯಾಸ ಗಳಿಸಿ ತಮ್ಮ ಕಾಲಮೇಲೆ ನಿಂತ ಗಂಡು ಮಕ್ಕಳು, ನೆಚ್ಚಿಕೊಳ್ಳುವ ಸೊಸೆಯಂದಿರು, ಮುಗ್ದ ಮಗಳ ತುಂಟಾಟಗಳು ,ಕುಲುಕುಲು ನಗೆಯ ಚಂದದ ಮೊಮ್ಮಕ್ಕಳು -ಇವರ ಸಂಗದಲ್ಲಿ ಒಂದಷ್ಟು ಖುಷಿಯ ಕ್ಷಣಗಳನ್ನು ಕಂಡದ್ದುಂಟು. ಪ್ರವಾಸವೆಂದರೆ ಅವರಿಗೆ ಖುಷಿ. ನಿವೃತ್ತಿಯ ವರೆಗೆ ಹೆಚ್ಚು ಪ್ರವಾಸ ಸಾಧ್ಯವಾಗಿರದಿದ್ದರೂ, ಬಳಿಕ ಕೆಲವು ತೀರ್ಥಕ್ಷೇತ್ರಗಳಿಗೆ ಹೋಗಿ ಬಂದದ್ದುಂಟು. ಅವರಿಗೆ ಹೆಚ್ಚು ಖುಷಿ ಕೊಟ್ಟದ್ದು ಅಮೆರಿಕದಲ್ಲಿದ್ದ ಮಗನಲ್ಲಿಗೆ ಭೇಟಿ ಕೊಟ್ಟ ಪ್ರವಾಸ ಮತ್ತು ತನ್ನ ಅಣ್ಣನ ಮಡದಿ ಮತ್ತು ಗಂಡ, ಗಂಡನ ತಂಗಿಯೊಡನೆ ಕೈಗೊಂಡ ಉತ್ತರ ಭಾರತದ ಪುಣ್ಯಕ್ಷೇತ್ರಗಳಾದ ಕಾಶಿ,ಪ್ರಯಾಗ, ಹರಿದ್ವಾರ, ರಿಷಿಕೇಶ ಇತ್ಯಾದಿಗಳ  ಪ್ರವಾಸ. ಅದರಲ್ಲೂ ಆಕೆ ಬಾಲ್ಯದಲ್ಲಿ ಕೇಳಿದ್ದ, ಆಕೆಯ ಅಣ್ಣ ಸನ್ಯಾಸಿಯಾಗಿ ಸೇರಿಕೊಂಡಿದ್ದ ರಿಷಿಕೇಶದಲ್ಲಿನ ಶಿವಾನಂದ ಸ್ವಾಮಿಗಳ ಆಶ್ರಮದ ಭೇಟಿ ಪುಳಕ ಹುಟ್ಟಿಸಿತ್ತು.

ಶಿವರಾಮ ಕಾರಂತರು ಹೇಳುತ್ತಾರೆ " ಬದುಕು ಪೂರ್ಣ ಸಿಹಿಯೂ ಅಲ್ಲ ಪೂರ್ಣ ಕಹಿಯೂ ಅಲ್ಲ, ಅವುಗಳ ಪೂರ್ಣ ಪ್ರಮಾಣದ ಪಾಕ. ಕಹಿಯನ್ನೂ ಸಹಿಸುವ ಶಕ್ತಿ ಗಳಿಸಿದಂತೆ ಜೀವನ ಮತ್ತಷ್ಟು ಬಲಗೊಳ್ಳುತ್ತದೆ. ಕಹಿಯ ಅನುಭವದಿಂದ ಸಿಹಿಗೆ ಮತ್ತಷ್ಟು ಕಳೆಯಿದೆ". ರಾಧಾ ಟೀಚರ್ ಕಹಿಯನ್ನು ಸಹಿಸುವ ಶಕ್ತಿ ಬಹಳವಾಗಿ ಗಳಿಸಿದ್ದರು. ಹಾಗಾಗಿ ಅವರ ಜೀವನದಲ್ಲಿ ಕಂಡಿದ್ದ ಸಿಹಿ ಕಳೆಯಿಂದ ಕೂಡಿತ್ತು ಅಂದುಕೊಳ್ಳೋಣ.

 

ರಾಧಾ ಟೀಚರ್ ಒಬ್ಬ ಮಮತೆಯಿಂದ ಅಕ್ಷರ ಕಲಿಸುವ ಗುರುವಾಗಿ,  ಹಲವು ಮಕ್ಕಳಿಗೆ ವಾತ್ಯಲ್ಯಮಯಿ ತಾಯಾಗಿ, ಬುದ್ದಿಮಾಂದ್ಯ ಮಗುವಿನ ಆರೈಕೆಗಾಗಿ ಅಪಾರ ಪರಿಶ್ರಮ ಪಟ್ಟು ಜೀವ ತೇಯ್ದ ಅಪರಿಮಿತ ಸಹನೆಯ ತಾಯಿಯ ಮಾದರಿಯಾಗಿ, ಮೊಮ್ಮಕ್ಕಳ ಹೃದಯಕ್ಕೆ ಮಮತೆಯ ಜೇನುಮಳೆ ಹರಿಸುತ್ತಿದ್ದ ಅಜ್ಜಿಯಾಗಿ, ಜೀವನದ ಕಷ್ಟಗಳಿಗೆ ಹೆದರದೆ ಧೈರ್ಯದಿಂದ ಎದುರಿಸುವ ಆತ್ಮವಿಶ್ವಾಸ ಹೊಂದಿರುವ ಮಹಿಳೆಯಾಗಿ ನಮ್ಮ ನೆನಪಲ್ಲಿ ಉಳಿಯುತ್ತಾರೆ.

 

(ಲಂಕೇಶ್ ರನ್ನು ನೆನಪಿಸಿಕೊಂಡು)

ನಾನು ಅರ್ಪಿಸುತ್ತಿದ್ದೇನೆ ಈ ತಾಯಿಗೆ ಕೃತಜ್ಞತೆಯನ್ನು

ನನ್ನ ಹೆತ್ತಿದ್ದಕ್ಕೆ , ತನ್ನೊಡಲ  ಹಾಲು ಕುಡಿಸಿದ್ದಕ್ಕೆ, ತೊದಲು ನುಡಿಯ ತಿದ್ದಿದ್ದಕ್ಕೆ,

ಎದೆಗೆ ಅಕ್ಷರ ತುಂಬಿಸಿದ್ದಕ್ಕೆ, ಹೆಜ್ಜೆ ಹಾಕಲು ಕಲಿಸಿದ್ದಕ್ಕೆ , ಬಿದ್ದಾಗ ಮೇಲೆ ಎತ್ತಿ ಮುದ್ದಿಸಿದ್ದಕ್ಕೆ,

ಜೋಗುಳ ಹಾಡುತ್ತ ತೊಟ್ಟಿಲು ತೂಗಿದ್ದಕ್ಕೆ, ಚಂದ್ರ ತಾರೆಯರ ಪರಿಚಯಿಸಿದ್ದಕ್ಕೆ,  ಹಾಡು  ಕಲಿಸಿದ್ದಕ್ಕೆ

ಮೊಣಕಾಲ ಗಾಯಕ್ಕೆ  ಮುಲಾಮು ಹಚ್ಚಿದ್ದಕ್ಕೆ , ಕುಂಡೆ ತೊಳೆದುಕೊಳ್ಳಲು ಕಲಿಸಿದ್ದಕ್ಕೆ,

ಅನ್ನ ಉಣ್ಣುವ  ಬಗೆಯ ಕಲಿಸಿದ್ದಕ್ಕೆ, ಅನ್ನ ಅಡಿಗೆ ಮಾಡಿಕೊಳ್ಳುವ ವಿಧಾನ ಕಲಿಸಿದ್ದಕ್ಕೆ

ಬಟ್ಟೆ ಒಗೆಯುವುದನ್ನು, ಕಸ ಗುಡಿಸುವುದನ್ನು ಮಸಾಲೆ ಅರೆಯಲು ಕಲಿಸಿದ್ದಕ್ಕೆ

ಹುರುಳಿ ಕೀಳಲು ಹೊದ್ದು ಮಾಡಲು ಹೊರೆ ಹೊರಲು ಕಲಿಸಿದ್ದಕ್ಕೆ

ಸಗಣಿ ಬಾಚಲು, ಬೆರಣಿ ತಟ್ಟಲು, ಗೊಬ್ಬರ ಹೊತ್ತು ಗದ್ದೆಗೆ ಹಾಕಿ ಉಳಲು ಕಲಿಸಿದ್ದಕ್ಕೆ

ಬೆಳೆ  ಬೆಳೆಯಲು ಕಲಿಸಿದ್ದಕ್ಕೆ

ನನ್ನ ಕೆಲಸ ನಾನೇ ಮಾಡಿಕೊಳ್ಳಲು ಕಲಿಸಿದ್ದಕ್ಕೆ

ನನ್ನ ಕಾಲ ಮೇಲೆ ನಿಲ್ಲಲು ಕಲಿಸಿದ್ದಕ್ಕೆ

ಸತ್ಯ ವೆಂದರೇನು  ನ್ಯಾಯವೆಂದರೇನೆಂದು ತಿಳಿಸಿದ್ದಕ್ಕೆ

ಸನ್ಮಾರ್ಗದಲ್ಲಿ ನಡೆಯುವುದನ್ನು ಕಲಿಸಿದ್ದಕ್ಕೆ

ಅಪಕಾರಿಗಳ ಬಗ್ಗೆ ತಿಳಿಸಿದ್ದಕ್ಕೆ ಉಪಕಾರ ಮಾಡುವುದನ್ನು ಕಲಿಸಿದ್ದಕ್ಕೆ

ಕಷ್ಟ ಎದುರಿಸುವ ಧೈರ್ಯ ತುಂಬಿದ್ದಕ್ಕೆ   ಸಹನೆಯನ್ನೂ  ಕಲಿಸಿದ್ದಕ್ಕೆ 

ಎಲ್ಲಿಯೂ ಹೇಗಾದರೂ ಬದುಕಬಹುದೆಂಬ ಆತ್ಮವಿಶ್ವಾಸ ತುಂಬಿದ್ದಕ್ಕೆ

ಇನ್ನೊಬ್ಬನಿಚ್ಛೆಯನ್ನು ದುಡಿವವನೇ ಸುಖಿ ಎಂಬ ಅರಿವು ಮೂಡಿಸಿದ್ದಕ್ಕೆ

ಉಸಿರು ಕಟ್ಟುವಷ್ಟು ನೋವಿದ್ದರೂ ಒಂದು  ಹನಿ ಕಣ್ಣೀರು ಸುರಿಸದೇ ನಿಶ್ಯಬ್ದವಾಗಿ ನಿರ್ಲಿಪ್ತಳಾಗಿ  ಕಣ್ಣೆದುರೇ ಹೋಗಿ ಬಿಡುವ ಜಾದೂ ತೋರಿಸಿದ್ದಕ್ಕೆ

ನಮಿಸುತ್ತೇನೆ   ಅಮ್ಮಾ  ನಿನಗೆ ಪೊಡಮಡುತ್ತಿದ್ದೇನೆ.

ನಮಸ್ಕಾರ.

 ______________________________________________________________________________________

Tribute to Radha Teacher


Welcoming all the dear ones to the event being organised to pay tribute to the retired teacher Radhamma S Shetty belonging to Tekkatte Patel house known to many as 'Radha Teacher'.


There is a well-known statement made by epic character Narada with Lord Krishna in Yakshagana - "I can't tell you, Krishna. But I cannot refrain from revealing to you"! He was in a dilemma. Today my situation is also similar. Talking about Radha teacher is difficult since it's an emotional topic for me. If I don't talk about her even on this occasion, it may haunt me for missing this right opportunity. 


First, I will talk about her life details.

Radha teacher was born as the 3rd child (among five children) of Halnadu Narayana Shetty & Tekkatte Patelhouse Manjamma Shedthy. She did her primary schooling in Tekkatte and high school in Bangalore & Mysore and did her teacher's training at Udupi. She started her teaching career in 1964 at a school in Hennabail close to Hosangadi of Kundapura Taluk. She was married to H. Subbanna Shetty in the year 1966. She became the mother of her first child in 1967 and shortly thereafter was appointed as the first teacher in the newly opened school in Bidkalkatte. She continued to serve in that school for a decade, meanwhile, in 1970, her husband joined the school as Headmaster. Every year she used to visit the homes in the surrounding villages to collect details about small children and persuade the parents to send their kids to school, and then enroll them in school and initiate literacy. She continued these activities all along her career. In 1977 she was transferred to Tekkatte school. Later in 1979, she was transferred to a school in Yadadi Mathyadi village. She continued there till 1986 and took voluntary retirement.


Though she gave birth to 4 children, she was like a mother to many more children. Many of the surrounding village parents used to hand over their children to her to look after their educational need. She then delicately persuades them to learn the alphabets and molds their tongue to speak the language. She becomes their second mother till they move on to study in higher classes.

As Kanaka Dasa says 'Like an expert who brings a parrot from the wild, feeds it in a cage, trains it to speak human language and listens patiently and corrects them', Radha teacher used to train the children and takes care of them.

She used to take the shy children, inward to her home & feed them with affection. She used to supply hot sambar to some children who had brought cold tiffin boxes to the classroom. She had accommodated some of her relative's children in her home to enable better education. She was more affectionate to female children and used to teach them songs & dances and arranged cultural events to showcase their talents and created colorful shows which helped expand the horizon of the imaginative world of children.


The children, who were soaked with her affection, used to enjoy learning while singing and dancing, thus they grew into being mature persons, becoming good citizens, and progressed well in their life.

Some among them say the following - 

'Whom I can remember when I wake up in the morning every day? 

I do remember Radha teacher who taught us the alphabet

I do remember Radha teacher for a moment as soon as I wake up.'


Some of the disciples have chosen teaching as their career following the footsteps of Radha teacher and continuing the noble work of sowing alphabets into the children's mind which will grow into a vast knowledge tree. Thus they contribute to building a new prosperous country where equality, tolerant, cordial, inclusive, and empathetic living are the hallmarks of the society (as the poet Gopal Krishna Adiga states in one of his poems).

Radha teacher's husband Subbanna Mastru also has a large group of disciples. He served in Bidkalkatte school as Headmaster for seven years and stived hard along with his colleagues to make that school one of the best schools in the neighborhood.


Radha teacher has four children. The first three are boys - Dinesh, Ganesh, Ramesh. Padmalatha is her last girl child. Dinesh did MSc. in Comp. Science, worked initially with DRDO as a scientist and later worked for Infosys as a software engineer for fifteen years and  for a charity organization.. He remained as a bachelor. Ganesh did BE(Electronics& Communication), worked as teacher for sometime, later in companies like Microcon, Bosch, Sage, etc. in Bangalore, and later moved to California, USA, and settled there. His wife Roopa, an engineering graduate works for Apple. Their daughter Risha is studying for Business degree at Stern School of Business in New York. Ramesh has his diploma in Mechanical Engineering and runs a finance company in Hunsemakki staying with his parents & also does agriculture. His wife Pavitra, a BCom graduate, and a homemaker, looks after her in-laws and oversees her children's education. Their first daughter Chelvi is studying for BE(Comp. Sc. & Design) in Bangalore, second daughter Survi is studying in PUC. Radha teacher's youngest daugther Padmalatha was born as down syndrome child and lived life as a baby for a long and passed away in 2019.


A Sanskrit Shubhashita says as follows - One should accept the sorrows in life in the same spirit as they accept happiness. Sorrow & happiness come into life one after another like a rotating wheel. 

But in Radha teacher's life, she had more sorrows than happiness. It looks as if the wheel got stuck and the sorrows have remained for a long. Happiness moments were rare.


Kannada Poet DVG says as follows in a poem - "Be grass downhill, jasmine to your kin,

Be a rock under difficulty's rain,

Be sweet and honey to the feeble,

Become one with all - Mankutimma."

Radha teacher had to face the rain of difficulties. Being a brave lady, she faced the difficulties like a stone. Her life was akin to the saying in a folk song - 'You are born and grown with crores of afflictions and lakhs of pains'!

 

When she was finishing her primary education, her elder brother who was a teacher disappeared from home and there was no clue whether he was alive or not. Hence her family was distressed and her schooling stopped. Her education resumed in Bangalore & Mysore after her brother came back after two years (He had gone to himalayas to become a monk). After her teacher's training stint, she got a job as primary school teacher. But soon she lost her father. Within a couple of years after her marriage, she lost her beloved elder brother who was supportive of all the siblings. The day she was celebrating the cradle ceremony of her third child she lost her mother. She was happy when she delivered a girl as her fourth child since she had longed for a girl child. But the girl child happened to be a down syndrome baby and she had to face hardship and suffer for the rest of her life in bringing up that girl child. 


We don't have the supporting environment for bringing up specially abled children in our country. Hence the parents of those children undergo enormous hardship and mental pressure. Society tries to keep those children away. Others normally don't understand the difficulties of those parents. Those parents' lives will be like hell. Though Radha teacher could teach the alphabet to hundreds of children, she couldn't teach her daughter successfully. Though it was taught to the daughter many times, she couldn't remember the letters. Though Radha teacher put sustained efforts for decades without giving up, it didn't give results. It was the biggest defeat in her profession! Just to take care of her daughter, Radha teacher gave up her teaching profession which she liked most. Even physical ailments, and sleeplessness started affecting her mental health too. That resulted in her acquiring a mental disease called 'Anxiety disorder'. Due to this, she started suspecting people around including some relatives & neighbors. That caused discomfort & some pain to them too.


Radha teacher never supported blind beliefs. She never blamed god for her difficulties in her life. She was following the philosophy of 'fighting & overcoming difficulties on her own'(as Purandara Dasa said in his poem 'Eesabeku iddu jayisabeku'). She fought all along her life for the family. In the last two decades of her life she suffered from chronic Asthma. She lost her daughter five years back. Her all siblings passed away one by one. (Her elder brother Narasimha Shetty passed away in 1969, Elder sister Sadamma in 2013, Youngest brother Shankar Shetty in 2016, younger brother Rajiv Shetty in 2023)

It is due to the enormous advancements in the Medical field that Radha teacher could survive for so long though she had life-threatening disease. Mainly we thank the doctors who treated her long - the pulmonary specialist Dr. Ashwini Kumar Mohapatra, psychiatry specialist Dr. Sripathi M Bhat, Bone specialist Dr. Dinesh & Dr. Pradeep, Dr. Mohan Kamath and Dr. Ganesh Kamath. The credit also goes to the people who took care of her during her ailment days mainly her husband, her youngest son Ramesh & his wife Pavitra along with some helpful neighbors. 


Though Radha teacher suffered most of her life, there are some delightful days she had in her life. She had some happy moments with a caring gentlemanly husband, affectionate disciples, endearing siblings, decently educated and self-sustaining sons, caring daughter-in-laws, naughty innocent daughter, and smiling and bubbling grandchildren. She liked traveling to places. Though she couldn't travel much till her retirement from her job, she did visit some holy places later. She was happy to visit her second son in the USA and she fondly remembers her trip to holy places in  Northern India along with her husband, her husband's sister, elder brother's wife covering Varanasi, Prayag, Haridwar, Rishikesh, etc. Especially she was thrilled to visit the Shivanand ashram in Rishikesh where her elder brother had joined to become a monk long back during her childhood. 

Writer Shivaram Karanth says that life is not completely sweet, nor completely bitter. It's a mixture of both. The more one develops the strength to digest the bitterness in life, life will become strong, and that experience enhances the value of sweetness in life.

Radha teacher had tremendous strength to digest the bitterness in her life. Hence the sweetness she had in her life was more valuable.


Radha teacher will remain in our memory as a teacher who affectionately taught reading & writing to toddlers, as an affectionate mother to many kids, as a model mother of a special child who has spent several decades with immense patience while looking after her child with down syndrome, as a loving caring grandmother for her grandchildren, as a bold woman who has shown self-confidence to face difficulties in life.

 

(Similar to  writer Lankesh's poem remembering Mother)


I offer my gratitude to thee - my Mother

For delivering me, breast-feeding me, correcting my stutter

For teaching alphabet, teaching me to put steps forward, and for consoling me when I fell

For singing lullabies, introducing the sun & moon to me and for teaching songs

For putting ointment on my knee wounds and for teaching how to wash my arse

For teaching how to eat my meal and for teaching how to cook my meal

For teaching how to wash my clothes, how to broom around and how to prepare spices for meal

For teaching how to harvest lentils and how to prepare fields for sowing

For teaching how to collect manure, how to plough the field & mix manure into the soil

For teaching how to grow crops and how to do all my household work

For teaching how to self-sustain

For teaching what is truth & what is justice

For teaching to follow the right path in life

For alerting me about the troublemakers and for teaching the habit of helping others

For teaching me patience and  encouraging me to bravely face the difficulties

For filling us with self-confidence to live anywhere in the world

For giving me the insight that happiness comes from working to fulfill other's desires

For showing the magic of vanishing in front of me without making any noise, without any emotions, with no tears, though you had enormous unbearable pain!

Salute you, mother, I bow to you.






--0--

No comments: